top of page

Cricket: 8 ವರ್ಷ, 110 ಕೋಟಿ ರೂ.ಗಳ PUMA ಜೊತೆಗಿನ ಒಪ್ಪಂದ ಅಂತ್ಯ, Virat Kohliಯ ಹೊಸ ಸಂಸ್ಥೆ ಇದೇನಾ?

  • Writer: new waves technology
    new waves technology
  • Apr 11
  • 1 min read

ವಿರಾಟ್ ಕೊಹ್ಲಿ ಪೂಮಾ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರ ಅನ್ವಯ ಅವರು ಮುಂದಿನ 8 ವರ್ಷಗಳ ಕಾಲ ಪೂಮಾ ಸಂಸ್ಥೆಯ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಪೂಮಾ ಉತ್ಪನ್ನಗಳನ್ನು ಪ್ರಮೋಟ್...

ನವದೆಹಲಿ: ಖ್ಯಾತ ಕ್ರೀಡಾ ಉಡುಪು ಮತ್ತು ಪರಿಕರಗಳ ದೈತ್ಯ ಸಂಸ್ಥೆ ಪೂಮಾ (PUMa) ಜೊತೆಗಿನ 8 ವರ್ಷಗಳ ಒಪ್ಪಂದವನ್ನು ವಿರಾಟ್ ಕೊಹ್ಲಿ (Virat Kohli) ಕೊನೆಗೊಳಿಸಿದ್ದಾರೆ.

ಹೌದು ಪೂಮಾ ಸಂಸ್ಥೆಯ ಜೊತೆಗಿನ 8 ವರ್ಷಗಳ ದೀರ್ಘಕಾಲದ ಒಪ್ಪಂದ ಕೊನೆಗೊಂಡಿದ್ದು, ಈ ಬಗ್ಗೆ ಸ್ವತಃ ಪೂಮಾ ಸಂಸ್ಥೆ ಮಾಹಿತಿ ನೀಡಿದೆ. "ಕ್ರೀಡಾ ಬ್ರ್ಯಾಂಡ್ ಪೂಮಾ ಇಂಡಿಯಾ ಕ್ರಿಕೆಟಿಗ ಮತ್ತು ಬ್ರಾಂಡ್ ರಾಯಭಾರಿ ವಿರಾಟ್ ಕೊಹ್ಲಿ ಜೊತೆಗಿನ ತನ್ನ ದೀರ್ಘಕಾಲದ ಪಾಲುದಾರಿಕೆಯನ್ನು ಕೊನೆಗೊಳಿಸಿದೆ.

ವಿರಾಟ್ ಅವರ ಭವಿಷ್ಯದ ಪ್ರಯತ್ನಗಳಿಗೆ ಪೂಮಾ ಶುಭ ಹಾರೈಸುತ್ತದೆ. ಹಲವಾರು ವರ್ಷಗಳಿಂದ, ಅನೇಕ ಅತ್ಯುತ್ತಮ ಅಭಿಯಾನಗಳು ಮತ್ತು ಹೊಸ ಉತ್ಪನ್ನ ಸಹಯೋಗಗಳಲ್ಲಿ ಅವರೊಂದಿಗಿನ ಅದ್ಭುತ ಸಂಬಂಧ ಇದಾಗಿದೆ. ಕೊಹ್ಲಿ ಅವರಿಗೆ ಪೂಮಾ ಉಜ್ವಲ ಭವಿಷ್ಯವನ್ನು ಬಯಸುತ್ತಿದೆ. ಅವರ ಜತೆಗಿನ ಸುದೀರ್ಘ ಹಾಗೂ ಅದ್ಭುತ ಸಹಯೋಗ ಹಲವು ಅದ್ಭುತ ಪ್ರಚಾರಗಳಿಗೆ ಮತ್ತು ಬ್ರಾಂಡ್ ಸಹಯೋಗಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಅಂತೆಯೇ ಕ್ರೀಡಾ ಬ್ರ್ಯಾಂಡ್ ಆಗಿ, ಪೂಮಾ ಮುಂದಿನ ಪೀಳಿಗೆಯ ಕ್ರೀಡಾಪಟುಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ಭಾರತದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯ ಭವಿಷ್ಯವನ್ನು ಆಕ್ರಮಣಕಾರಿಯಾಗಿ ನಿರ್ಮಿಸುತ್ತದೆ" ಎಂದು ಪೂಮಾ ವಕ್ತಾರರು ತಿಳಿಸಿದ್ದಾರೆ.

8 ವರ್ಷಕ್ಕೆ 110 ಕೋಟಿ ರೂಗಳ ಒಪ್ಪಂದ

ಇನ್ನು 2018ರಲ್ಲಿ ವಿರಾಚ್ ಕೊಹ್ಲಿ ಪೂಮಾ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರ ಅನ್ವಯ ಅವರು ಮುಂದಿನ 8 ವರ್ಷಗಳ ಕಾಲ ಪೂಮಾ ಸಂಸ್ಥೆಯ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಪೂಮಾ ಉತ್ಪನ್ನಗಳನ್ನು ಪ್ರಮೋಟ್ ಮಾಡಲಿದ್ದಾರೆ ಮತ್ತು ಇದಕ್ಕಾಗಿ ಅವರು 110 ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಅಜಿಲಿಟಾಸ್ ಕೊಹ್ಲಿ ಹೊಸ ಒಪ್ಪಂದ?

ಪೂಮಾ ಒಪ್ಪಂದ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತೊಂದು ಖ್ಯಾತ ಸಂಸ್ಥೆ ಅಜಿಲಿಟಾಸ್ ಕಂಪನಿಯ ಜತೆ ಸಹಯೋಗ ಹೊಂದುವ ನಿರೀಕ್ಷೆ ಇದೆ. 2023ರಲ್ಲಿ ಇದೇ ಪೂಮಾ ಇಂಡಿಯಾದ ಮಾಜಿ ಉದ್ಯೋಗಿ ಹಾಗೂ ಆಗ್ನೇಯ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿಯವರಿಂದ ಅಜಿಲಿಟಾಸ್ ಆರಂಭವಾಗಿತ್ತು. ಈ ಅಜಿಲಿಟಾಸ್ ಕಂಪನಿ ರಿಟೇಲ್ ಕ್ರೀಡಾ ಉಡುಪುಗಳನ್ನು ಭಾರತ ಹಾಗೂ ವಿದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಕಳೆದ ವರ್ಷ ಅಜಿಲಿಟಾಸ್, ಇಟೆಲಿಯನ್ ಕ್ರೀಡಾ ಬ್ರಾಂಡ್ ಲೊಟ್ಟೊದ ಸುಧೀರ್ಘ ಅವಧಿಯ ಲೈಸನ್ಸ್ ಹಕ್ಕನ್ನು ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರದೇಶಕ್ಕೆ ಖರೀದಿಸಿತ್ತು.

ಎಂಟು ವರ್ಷಗಳ ಪೂಮಾ ಗುತ್ತಿಗೆ ಮುಗಿದ ಹಿನ್ನೆಲೆಯಲ್ಲಿ ಅಜಿಲಿಟಾಸ್ ನಲ್ಲಿ ಹೂಡಿಕೆ ಮಾಡುವ ಸಂಬಂಧ ಕೊಹ್ಲಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಇದನ್ನು ಅಧಿಕೃತವಾಗಿ ಶೀಘ್ರವೇ ಪ್ರಕಟಿಸಲಿದ್ದಾರೆ ಎಂದು ವರದಿ ಹೇಳಿದೆ.

Comments


bottom of page