top of page

ICC Champions Trophy 2025: ಪಾಕ್ ವಿರುದ್ಧ ಗೆಲುವು, Virat Kohli ದಾಖಲೆಗಳ ಸುರಿಮಳೆ, ಸಚಿನ್ ತೆಂಡೂಲ್ಕರ್ ರೆಕಾರ್ಡ್ ಕೂಡ ಪತನ

Writer: new waves technologynew waves technology

ಪಾಕಿಸ್ತಾನದ ಎಲ್ಲ ಬೌಲಿಂಗ್ ತಂತ್ರಗಾರಿಕೆಗಳನ್ನೂ ಛಿದ್ರ ಮಾಡಿದ ಕೊಹ್ಲಿ ಪಂದ್ಯದ ಕೊನೆಯಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಫಾರ್ಮ್ ಗೆ ಮರಳಿರುವ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಸುರಿಮಳೆ ಗೈದಿದ್ದಾರೆ.

ಹೌದು.. ದುಬೈನ ದುಬೈ ಆಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 242 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅಕ್ಷರಶಃ ಮ್ಯಾಚ್ ವಿನ್ನರ್ ಆಗಿ ಪರಿಣಮಿಸಿದ್ದರು.

ಪಾಕಿಸ್ತಾನದ ಎಲ್ಲ ಬೌಲಿಂಗ್ ತಂತ್ರಗಾರಿಕೆಗಳನ್ನೂ ಛಿದ್ರ ಮಾಡಿದ ಕೊಹ್ಲಿ ಪಂದ್ಯದ ಕೊನೆಯಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಚೇಸಿಂಗ್ ವೇಳೆ 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 100 ರನ್ ಗಳಿಸಿದ ವಿರಾಟ್ ಕೊಹ್ಲಿ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು. ಈ ಶತಕದೊಂದಿಗೆ ಕೊಹ್ಲಿ ತನ್ನ ಹೆಸರಿಗೆ ಮತ್ತಷ್ಟು ದಾಖಲೆಗಳನ್ನು ಸೇರ್ಪಡೆಗೊಳಿಸಿದರು.

ಪಾಕ್ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ ಕೊಹ್ಲಿ ಇದರೊಂದಿಗೆ ತಮ್ಮ ಏಕದಿನ ಶತಕಗಳ ಸಂಖ್ಯೆಯನ್ನು 51ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (49 ಶತಕ) ನಂತರದ ಸ್ಥಾನದಲ್ಲಿದ್ದಾರೆ.


ಅದ್ಭುತ ಫೀಲ್ಡಿಂಗ್

ಇನ್ನು ಕೊಹ್ಲಿ ಕೇವಲ ಬ್ಯಾಟಿಂಗ್ ಮಾತ್ರವಲ್ಲ.. ಫೀಲ್ಡಿಂಗ್ ನಲ್ಲೂ ದಾಖಲೆ ನಿರ್ಮಿಸಿದ್ದಾರೆ. ನಿನ್ನೆ ಪಾಕಿಸ್ತಾನದ ಕುಶ್ದಿಲ್ ಶಾ ಮತ್ತು ನಸೀಮ್ ಶಾ ಅವರ ಕ್ಯಾಚ್ ಗಳನ್ನು ಪಡೆದರು. ಆ ಮೂಲಕ ಕೊಹ್ಲಿ ತಮ್ಮ ಕ್ಯಾಚ್ ಗಳ ಸಂಖ್ಯೆಯನ್ನು 158ಕ್ಕೆ ಏರಿಕೆ ಮಾಡಿಕೊಂಡರು. ಈ ಮೂಲಕ ಭಾರತದ ಮೊಹಮ್ಮದ್‌ ಅಜರುದ್ದೀನ್‌ (156) ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು. ಅಲ್ಲದೆ ಶ್ರೀಲಂಕಾದ ಮಹೇಲ ಜಯವರ್ಧನೆ (218) ಮತ್ತು ರಿಕಿ ಪಾಟಿಂಗ್‌ (160) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ

ಇನ್ನು ನಿನ್ನೆ ಅಮೋಘ ಬ್ಯಾಟಿಂಗ್ ಮೂಲಕ ಕೊಹ್ಲಿ ಪಂದ್ಯಶ್ರೇಷ್ಠ ಪ್ರಸಸ್ತಿಗೆ ಭಾಜನರಾಗಿದ್ದು ಈ ಮೂಲಕ ಭಾರತದ ಪರ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ದಾಖಲೆ ಕೊಹ್ಲಿ ಪಾತ್ರರಾದರು. ಇದು ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ಪಡೆದ 5ನೇ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ. ಅಂತೆಯೇ ಯಾವುದೇ ದೇಶದ ಆಟಗಾರ ಒಂದೇ ತಂಡದ ವಿರುದ್ಧ ಮೂರಕ್ಕಿಂತ ಅಧಿಕ ಬಾರಿ ಈ ಗೌರವ ಗಳಿಸಿಲ್ಲ. ಅಂತೆಯೇ ಕೊಹ್ಲಿ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದು, ಕಿಂಗ್ ಕೊಹ್ಲಿ ಈವರೆಗೆ 14 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

Player of the Match awards for Kohli vs Pakistan in ICC tournaments

  • 78*(61) Colombo RPS World T20 2012

  • 107(126) Adelaide ODI World Cup 2015

  • 55*(37) Kolkata World T20 2016

  • 82*(53) Melbourne T20 World Cup 2022

  • 100*(111) Dubai Champions Trophy 2025

No other player has won more than three Player of the Match against a single opponent in ICC tournaments.

ವೇಗದ 14 ಸಾವಿರ ರನ್

ಇದೇ ಪಂದ್ಯದಲ್ಲಿ ಕೊಹ್ಲಿ ಕೇವಲ 15 ರನ್ ಗಳಿಸಿದ್ದಾಗ ತಮ್ಮ ಏಕದಿನ ರನ್ ಗಳಿಕೆಯನ್ನು 14 ಸಾವಿರಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ವೇಗವಾಗಿ 14 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾದರು. ಕೊಹ್ಲಿ ಕೇವಲ 287 ಇನಿಂಗ್ಸ್​ಗಳ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

ಸಚಿನ್ ದಾಖಲೆ ಪತನ

ಐಸಿಸಿ ಏಕದಿನ ಟೂರ್ನಿಯಲ್ಲಿ ಅತ್ಯಧಿಕ 50+ ಸ್ಕೋರ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ 23 ಫಿಫ್ಟಿ ಪ್ಲಸ್ ಸ್ಕೋರ್​ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರು. ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಕಿಂಗ್ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅಂತೆಯೇ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (18426) ಹಾಗೂ ಕುಮಾರ್ ಸಂಗಾಕ್ಕರ (14234) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

Comments


bottom of page