top of page

IPL 2025: RR ವಿರುದ್ಧ KKR ತಂಡಕ್ಕೆ 8 ವಿಕೆಟ್ ಗಳ ಗೆಲುವು

  • Writer: new waves technology
    new waves technology
  • Mar 27
  • 1 min read

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡ, ರಾಜಸ್ಥಾನ್ ತಂಡವನ್ನು 20 ಓವರ್ ಗಳಲ್ಲಿ 151 ರನ್ ಗಳಿಗೆ ಕಟ್ಟಿ ಹಾಕಿತು.

ಗುವಾಹಟಿಯಲ್ಲಿ ನಡೆದ 6ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ 8 ವಿಕೆಟ್ ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡ, ರಾಜಸ್ಥಾನ್ ತಂಡವನ್ನು 20 ಓವರ್ ಗಳಲ್ಲಿ 151 ರನ್ ಗಳಿಗೆ ಕಟ್ಟಿ ಹಾಕಿತು. ರಾಜಸ್ಥಾನ್ ಪರ ಮಧ್ಯಮ ಕ್ರಮಂಕದ ಬ್ಯಾಟರ್ ಗಳ ವೈಫಲ್ಯದಿಂದಾಗಿ ತಂಡ ಬೃಹತ್ ರನ್ ಗಳಿಸುವಲ್ಲಿ ಎಡವಿತ್ತು. ಧ್ರುವ್ ಜುರೆಲ್ 28 ಎಸೆತಗಳಲ್ಲಿ 33 ರನ್ ಗಳಿಸಿದ್ದು ತಂಡದ ಪರ ಗರಿಷ್ಠ ರನ್ ಆಗಿದೆ.

ಸಾಧಾರಣ ಮೊತ್ತದ ರನ್ ಟಾರ್ಗೆಟ್ ಚೇಸ್ ಮಾಡಿದ ಕೋಲ್ಕತ್ತಾ ತಂಡ 17.3 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 153 ರನ್ ಗಳಿಸುವ ಮೂಲಕ ಗೆಲುವನ್ನು ತನ್ನದಾಗಿಸಿಕೊಂಡಿತು.

ಕೆಕೆಆರ್ ಪರ ಆರಂಭಿಕ ಆಟಗಾರ ಮೊಯೀನ್ ಅಲಿ 12 ಎಸೆತಗಳಲ್ಲಿ 5 ರನ್ ಗಳಿಸಿದರೆ ಕ್ವಿಂಟೋನ್ ಡಿ ಕಾಕ್ 61 ಎಸೆತಗಳಲ್ಲಿ 97* ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಅಜಿಂಕ್ಯಾ ರೆಹಾನೆ 15 ಎಸೆತಗಳಲ್ಲಿ 18 ರನ್ ಗಳಿಸಿದರು.

Comments


bottom of page