top of page

Women’s T20 World Cup 2024: ನ್ಯೂಜಿಲೆಂಡ್ ಗೆ ಚೊಚ್ಚಲ ಟಿ20 ವಿಶ್ವಕಪ್!

  • Writer: new waves technology
    new waves technology
  • Oct 24, 2024
  • 1 min read

ಕಳೆದ ವಿಶ್ವಕಪ್ ನಲ್ಲೂ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು.











ದುಬೈ: ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ನ್ನು ಮುಡಿಗೇರಿಸಿಕೊಂಡಿದೆ. ದುಬೈ ನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಈ ಪಂದ್ಯ ನಡೆದಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 32 ರನ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ. ಈ ಪಂದ್ಯದಲ್ಲಿ ಸೋಲೊಪ್ಪಿಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾದ ಮಹಿಳಾ ತಂಡ ಸತತ 2ನೇ ಬಾರಿಗೆ ವಿಶ್ವಕಪ್ ವಂಚಿತವಾಗಿದೆ.


ಕಳೆದ ವಿಶ್ವಕಪ್ ನಲ್ಲೂ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ಸತತ ಎರಡನೇ ಬಾರಿಯೂ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಇನ್ನು 2010 ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್​ಗೇರಿದ್ದ ನ್ಯೂಜಿಲೆಂಡ್ ತಂಡ ಸೋಫಿ ಡಿವೈನ್ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಾಸ್ ಸೋತ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ 159 ರನ್​ಗಳ ಗುರಿ ನೀಡಿತ್ತು. ಅಮೆಲಿಯಾ ಕೆರ್ 43 ರನ್, ಸುಜಿ ಬೇಟ್ಸ್ 32 ರನ್ ಮತ್ತು ಬ್ರೂಕ್ ಹ್ಯಾಲಿಡೇ 38 ರನ್‌ಗಳನ್ನು ಕಲೆ ಹಾಕಿ ಪ್ರಬಲ ಟಾರ್ಗೆಟ್ ನೀಡಿತ್ತು.

ICC Womens T20 World Cup 2024: ಮತ್ತೆ ವಿವಾದಕ್ಕೆ ಸಿಲುಕಿದ Sanjay Manjrekar

ದಕ್ಷಿಣ ಆಫ್ರಿಕಾ ಬೌಲಿಂಗ್​ ವಿಭಾಗದಲ್ಲಿ ಮ್ಲಾಬಾ ಎರಡು ವಿಕೆಟ್ ಪಡೆದರೆ, ಟ್ರೇಯಾನ್, ಕ್ಲರ್ಕ್ ಮತ್ತು ಖಾಕಾ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಕೆಟ್​ಗೆ ಅತ್ಯುತ್ತಮ ಜೊತೆಯಾಟ ಲಭಿಸಿ 51 ರನ್​ಗಳನ್ನು ಕಲೆಹಾಕಿತು. ಈ ಜೊತೆಯಾಟದ ಬಳಿಕ ತಂಡದಲ್ಲಿ ಪೆವಿಲಿಯನ್ ಪರೇಡ್ ಆರಂಭವಾಯಿತು. ಅನುಭವಿ, ಭರವಸೆಯ ಬ್ಯಾಟರ್ ಗಳು ನ್ಯೂ ಜಿಲ್ಯಾಂಡ್ ತಂಡವನ್ನು ಎದುರಿಸಲು ವಿಫಲರಾದರು. ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಗಳಿಗೆ ಸೋಲೊಪ್ಪಿಕೊಂಡಿತು.

Comments


bottom of page