top of page

ಆರ್ಥಿಕವಾಗಿ ಜವಾಬ್ದಾರಿಯುತ ಬಜೆಟ್ ಮಂಡನೆ ಮಾಡಿ: ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ

Writer: new waves technologynew waves technology

ಯಾವುದೇ ಒಂದು ಸರ್ಕಾರ ವಿತ್ತೀಯ ಬದ್ಧತೆ ಪೂರೈಸಲು ಸಾಲ ತೆಗೆದುಕೊಳ್ಳುವುದು ಸಹಜ. ಅಂತಹ ಸಾಲವನ್ನು ಬಂಡವಾಳ ಹೂಡಿಕೆಗಳಿಗೆ ಬಳಸಬೇಕೇ ಹೊರತು. ರಾಜಸ್ವ ವೆಚ್ಚಕ್ಕಲ್ಲ. ಆದರೆ, ಸತತ ಎರಡು ವರ್ಷ ರಾಜಸ್ವ ಕೊರತೆಯ ಬಜೆಟ್‌ ಮಂಡಿಸುವುದರೊಂದಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ಕಾಯ್ದೆಯ ನಿರ್ವಹಣೆಯನ್ನು ಉಲ್ಲಂಘಿಸಿದ್ದೀರಿ.

ಬೆಂಗಳೂರು: ಮಾರ್ಚ್ 7 ರಂದು ಜನಪರ ಬಜೆಟ್ ಮಂಡನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ ಸಾಮಾಜಿಕ ಕಲ್ಯಾಣದ ಜೊತೆಗೆ ಆರ್ಥಿಕ ಜವಾಬ್ದಾರಿ ಮತ್ತು ಅಭಿವೃದ್ಧಿಯನ್ನು ಆಧರಿಸಿ ಬಜೆಟ್ ಮಂಡನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ಒಂದು ಸರ್ಕಾರ ವಿತ್ತೀಯ ಬದ್ಧತೆ ಪೂರೈಸಲು ಸಾಲ ತೆಗೆದುಕೊಳ್ಳುವುದು ಸಹಜ. ಅಂತಹ ಸಾಲವನ್ನು ಬಂಡವಾಳ ಹೂಡಿಕೆಗಳಿಗೆ ಬಳಸಬೇಕೇ ಹೊರತು. ರಾಜಸ್ವ ವೆಚ್ಚಕ್ಕಲ್ಲ. ಆದರೆ, ಸತತ ಎರಡು ವರ್ಷ ರಾಜಸ್ವ ಕೊರತೆಯ ಬಜೆಟ್‌ ಮಂಡಿಸುವುದರೊಂದಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ಕಾಯ್ದೆಯ ನಿರ್ವಹಣೆಯನ್ನು ಉಲ್ಲಂಘಿಸಿದ್ದೀರಿ.

ಎಸ್‌ಸಿಪಿ–ಟಿಎಸ್‌ಪಿ ಯೋಜನೆಗೆ ಕಾಯ್ದಿರಿಸಲಾದ ಮೊತ್ತದಲ್ಲಿ 25,426 ಕೋಟಿ ರೂಗಳನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ಅಲ್ಲದೇ, ಲೋಕೋಪಯೋಗಿ, ನೀರಾವರಿ, ಕಂದಾಯ ಸೇರಿದಂತೆ ನಾನಾ ಇಲಾಖೆಗಳು 6,000 ಕೋಟಿ ರೂ. ಬಿಲ್‌ ಬಾಕಿ ಉಳಿಸಿಕೊಂಡಿವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. 15 ಬಾರಿ ಬಜೆಟ್ ಮಂಡಿಸಿರುವ ನಿಮಗೆ ಇದು ಶೋಭೆ ತರುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.


ಎರಡೇ ವರ್ಷದಲ್ಲಿ 2 ಲಕ್ಷ ಕೋಟಿ ರೂ.ಸಾಲದ ಹೊರೆಯನ್ನು ಕನ್ನಡಿಗರ ಮೇಲೆ ಹೊರಿಸಿದ್ದೀರಿ. ಮುಂಬರುವ ಬಜೆಟ್‌ನಲ್ಲಿ ಇನ್ನೆಷ್ಟು ಸಾಲದ ಹೊರೆ ಹೊರಿಸುತ್ತೀರಿ ಎಂಬ ಆತಂಕ ಜನರನ್ನು ಕಾಡುತ್ತಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ರಾಜ್ಯ ಸರ್ಕಾರ ಅಗತ್ಯ ಹಣ ಹಂಚಿಕೆ ಮಾಡಲು ವಿಫಲವಾದರೆ, ಕೇಂದ್ರದ ಸಹಾಯಧನ ಕಳೆದುಕೊಳ್ಳುವ ಅಪಾಯವಿದೆ’ ಎಂದು ಎಚ್ಚರಿಸಿದ್ದಾರೆ.

ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ನಿಮ್ಮ ಸರ್ಕಾರ ಈಗಾಗಲೇ ನೀರು, ಹಾಲು, ಪೆಟ್ರೋಲ್, ವಿದ್ಯುತ್, ತೆರಿಗೆ ಮತ್ತು ಇತರೆ ಆಗತ್ಯ ವಸ್ತುಗಳ ಬೆಲೆಯನ್ನು ಹೆಚ್ಟಳ ಮಾಡಿದ್ದು, ಇದನ್ನು ಬಿಜೆಪಿ ವಿರೋಧಿಸುತ್ತದೆ.

‘ಮುಂದಿನ ಬಾರಿ ಬಜೆಟ್‌ ಮಂಡಿಸುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರ ನಿರ್ಣಾಯಕ ಅಗತ್ಯಗಳನ್ನು ಪೂರೈಸುವುದರ ಜತೆಗೆ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ನಿಮಗೆ ಇದು ಸದಾವಕಾಶ ಎಂದು ತಿಳಿಸಿದ್ದಾರೆ.

Commenti


bottom of page