top of page

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧನದ ನಂತರ ನಟಿ ರನ್ಯಾ ಮೇಲೆ ಹಲ್ಲೆ?

Writer: new waves technologynew waves technology

ಮಾಣಿಕ್ಯ ಮತ್ತು ಪಟಾಕಿಯಂತಹ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರನ್ಯಾ ಅವರನ್ನು ಮಾರ್ಚ್ 3 ರಂದು ಬಂಧಿಸಲಾಗಿದೆ.


ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ನ್ಯಾಯಾಲಯ ಶುಕ್ರವಾರ ಮೂರು ದಿನಗಳ ಕಾಲ ಕಂದಾಯ ಗುಪ್ತಚರ ನಿರ್ದೇಶನಾಲಯ(DRI)ದ ಕಸ್ಟಡಿಗೆ ನೀಡಿದೆ.

ಮಾಣಿಕ್ಯ ಮತ್ತು ಪಟಾಕಿಯಂತಹ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರನ್ಯಾ ಅವರನ್ನು ಮಾರ್ಚ್ 3 ರಂದು ಬಂಧಿಸಲಾಗಿದೆ. ಅಂದು ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.

ಮಾರ್ಚ್ 4 ರಂದು, ರನ್ಯಾ ರಾವ್ ಅವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಮಾರ್ಚ್ 18 ರವರೆಗೆ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಮಾರ್ಚ್ 4 ರಂದು, ರನ್ಯಾ ರಾವ್ ಅವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಮಾರ್ಚ್ 18 ರವರೆಗೆ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ನಟಿಯನ್ನು ವಶಕ್ಕೆ ತೆಗೆದುಕೊಳ್ಳುವ ಮೊದಲು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವಿಚಾರಣೆಯ ಸಮಯದಲ್ಲಿ, ರನ್ಯಾ ಅವರು ವ್ಯಾಪಾರ ಉದ್ದೇಶಗಳಿಗಾಗಿ ತಾನು ದುಬೈಗೆ ಪ್ರಯಾಣಿಸಿರುವುದಾಗಿ ಹೇಳಿದ್ದಾರೆ.

ಏತನ್ಮಧ್ಯೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿಯನ್ನು ಬಂಧಿಸಿದ ಕೂಡಲೇ, ಊದಿಕೊಂಡ ಕಣ್ಣುಗಳು ಮತ್ತು ಮೂಗೇಟುಗಳಿರುವ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ವಿಮಾನ ನಿಲ್ದಾಣದಲ್ಲಿ ಬಂಧನದ ಸಮಯದಲ್ಲಿ ಅಥವಾ ನಂತರ ನಟಿಯ ಮೇಲೆ ಹಲ್ಲೆ ನಡೆದಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಹಲ್ಲೆ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸದ ಹೊರತು ಆಯೋಗ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.

"ವಾಸ್ತವವಾಗಿ, ಯಾರಾದರೂ ನಮಗೆ ದೂರು ನೀಡಬೇಕು. ಮಹಿಳಾ ಆಯೋಗವು ದೂರು ನೀಡಿದರೆ ತನಿಖೆ ನಡೆಸುತ್ತದೆ" ಎಂದು ಅವರು ಹೇಳಿದರು.

ಇದೇ ವೇಳೆ ಒಂದು ವೇಳೆ ರನ್ಯಾ ಅವರ ಮೇಲೆ ಹಲ್ಲೆಯಾಗಿದ್ದರೆ ನಾನು ಅದನ್ನು ಖಂಡಿಸುತ್ತೇನೆ., "ದಾಳಿ ಮಾಡಿದವರು ಯಾರೇ ಆಗಿರಲಿ ಹಾಗೆ ಮಾಡಬಾರದು ಮತ್ತು ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾರ ಮೇಲೂ ಹಲ್ಲೆ ಮಾಡುವ ಹಕ್ಕು ಯಾರಿಗೂ ಇಲ್ಲ. ಅದು ಮಹಿಳೆಯಾಗಿರಲಿ ಅಥವಾ ಬೇರೆಯವರಾಗಿರಲಿ. ಆದರೆ ನಾನು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ" ಎಂದು ಹೇಳಿದರು.


Comments


bottom of page