top of page

ಟೀಂ ಇಂಡಿಯಾ ಸಹಾಯಕ ಕೋಚ್ ಸ್ಥಾನದಿಂದ ಅಭಿಷೇಕ್ ನಾಯರ್ ಕಿತ್ತೆಸೆದ ಬಿಸಿಸಿಐ! ಇದೇ ಕಾರಣ

  • Writer: new waves technology
    new waves technology
  • 19 hours ago
  • 1 min read

ಗಂಭೀರ್, ಆಯ್ಕೆಗಾರರ ​​ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನೊಳಗೊಂಡ ಸಮನ್ವಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಂಬೈ: ಟೀಂ ಇಂಡಿಯಾದ ಸಹಾಯಕ ಕೋಚ್ ಸ್ಥಾನದಿಂದ ಅಭಿಷೇಕ್ ನಾಯರ್ ಅವರನ್ನು ಬಿಸಿಸಿಐ ತೆಗೆದುಹಾಕಿದೆ. ಮಾಜಿ ಆಲ್ ರೌಂಡರ್ ಆಗಿರುವ ಅಭಿಷೇಕ್ ನಾಯರ್, ಕಳೆದ ವರ್ಷ ಜುಲೈ ನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸಹಾಯಕ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಸೋತಿತ್ತು. ಇದರಿಂದಾಗಿ ಅವರನ್ನು ಸಹಾಯಕ ಕೋಚ್ ಸ್ಥಾನದಿಂದ ತೆಗೆಯಲಾಗಿದೆ ಎಂದು ಕಾರಣ ನೀಡಲಾಗಿದೆ.

ಗಂಭೀರ್, ಆಯ್ಕೆಗಾರರ ​​ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನೊಳಗೊಂಡ ಸಮನ್ವಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆದರೆ ನೆರವು ತಂಡದ ಪ್ರಮುಖ ಸಿಬ್ಬಂದಿ ಮತ್ತು ಭಾರತ ತಂಡದ ಹಿರಿಯ ಆಟಗಾರನ ಜೊತೆ ಭಿನ್ನಾಭಿಪ್ರಾಯ ಈ ಕ್ರಮಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್ ಸೋಹಮ್ ದೇಸಾಯಿ ಕೂಡಾ ಮೂರು ವರ್ಷಗಳ ಅವಧಿ ಪೂರೈಸಿದ್ದು, ಅವರೂ ತಮ್ಮ ಹುದ್ದೆ ಕಳೆದುಕೊಳ್ಳುವ ನಿರೀಕ್ಷಿಯಿದೆ. ಬಿಸಿಸಿಐನ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಅನ್ವಯ ನೆರವು ಸಿಬ್ಬಂದಿಯ ಅವಧಿಯನ್ನು ಮೂರು ವರ್ಷಗಳಿಗೆ ಸಿಮೀತಗೊಳಿಸಲಾಗಿದೆ.


Comments


bottom of page