top of page

ತತ್ತರಿಸಿದ Indian Stock Market: ವಾರದಲ್ಲಿ ಹೂಡಿಕೆದಾರರಿಗೆ 20 ಲಕ್ಷ ಕೋಟಿ ರೂ ನಷ್ಟ!

Writer: new waves technologynew waves technology

ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಸಂಚಿತ ಮಾರುಕಟ್ಟೆ ಕ್ಯಾಪ್ 441.09 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಹಿಂದಿನ ದಿನ ಇದು 451.14 ಲಕ್ಷ ಕೋಟಿ ರೂ. ಆಗಿತ್ತು. ಕಳೆದ ಒಂದು ವಾರದಲ್ಲಿ ಬಿಎಸ್ಇ ಲಿಸ್ಟೆಡ್ ಕಂಪನಿಗಳು ಸುಮಾರು 20 ಲಕ್ಷ ಕೋಟಿ (19.73 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿವೆ.

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಮತ್ತೆ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ.

ಹೌದು.. ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಮತ್ತೊಮ್ಮೆ ಮಹಾ ಕುಸಿತದೊಂದಿಗೆ ದಿನದ ಮತ್ತು ವಾರದ ವಹಿವಾಟು ಮುಕ್ತಾಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.1.49ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.1.52ರಷ್ಟು ಮಹಾ ಕುಸಿತ ದಾಖಲಿಸಿದೆ.


ಸೆನ್ಸೆಕ್ಸ್ ಇಂದು ಬರೊಬ್ಬರಿ 1,176.45 ಅಂಕಗಳ ಇಳಿಕೆಯೊಂದಿಗೆ 78,041.59 ಅಂಕಗಳಿಗೆ ಕುಸಿದಿದ್ದು, ನಿಫ್ಟಿ 364.20 ಅಂಕಗಳ ಇಳಿಕೆಯೊಂದಿಗೆ 23,587.50 ಅಂಕಗಳಿಗೆ ಇಳಿಕೆಯಾಗಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.

ಒಂದು ಹಂತದಲ್ಲಿ ಸೆನ್ಸೆಕ್ಸ್ 77, 880.28 ಅಂಕಗಳಿಗೆ ಕುಸಿದಿತ್ತು. ಆದರೆ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 78,041.59 ಅಂಕಗಳಿಗೆ ಏರಿಕೆಯಾಯಿತು.

ನಿಫ್ಟಿ ಕೂಡ ಇಂದು 23, 540.90 ಅಂಕಗಳಿಗೆ ಕುಸಿತವಾಗಿತ್ತಾದರೂ ದಿನದ ವಹಿವಾಟು ಅಂತ್ಯದ ವೇಳೆಗೆ ಅಲ್ಪ ಏರಿಕೆ ಕಂಡು 23,587.50 ಅಂಕಗಳಿಗೆ ಏರಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿತು.


ಅಮೆರಿಕ ದರ ಕಡಿತ

ಇನ್ನು 2 ದಿನಗಳ ಷೇರು ಸೂಚ್ಯಂಕ ಕುಸಿತಕ್ಕೆ ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತ ನಿರ್ಧಾರ ಕಾರಣ ಎಂದು ಹೇಳಲಾಗಿದ್ದು, ದರ ಕಡಿತ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಭಾರತೀಯ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಮುಂದಾದರು. ಇದು ಇಂದು ಮತ್ತೆ ಭಾರತೀಯ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಭಾರತ ಮಾತ್ರವಲ್ಲದೇ ಏಷ್ಯಾದ ಇತರೆ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳೂ ಕೂಡ ಭಾರಿ ಪ್ರಮಾಣದ ಕುಸಿತ ದಾಖಲಿಸಿದೆ.

ಹೂಡಿಕೆದಾರರಿಗೆ ಮತ್ತೆ 9 ಲಕ್ಷ ಕೋಟಿ ರೂ ನಷ್ಟ!

ಇನ್ನು ಇಂದು ಮಾರುಕಟ್ಟೆ ಕುಸಿತದ ಪರಿಣಾಮ ಹೂಡಿಕೆದಾರರ ಸುಮಾರು 9 ಲಕ್ಷ ಕೋಟಿ ರೂ ಗಳಷ್ಟು ನಷ್ಟವಾಗಿದೆ. ನಿನ್ನೆ ಕೂಡ ಭಾರಿ ಕುಸಿತದಿಂದ ಹೂಡಿಕೆದಾರರ 4 ಲಕ್ಷ ಕೋಟಿ ರೂ ನಷ್ಟವಾಗಿತ್ತು.

ವಾರದಲ್ಲಿ ಹೂಡಿಕೆದಾರರಿಗೆ 20 ಲಕ್ಷ ಕೋಟಿ ರೂ ನಷ್ಟ

ಅಂತೆಯೇ ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಸಂಚಿತ ಮಾರುಕಟ್ಟೆ ಕ್ಯಾಪ್ 441.09 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಹಿಂದಿನ ದಿನ ಇದು 451.14 ಲಕ್ಷ ಕೋಟಿ ರೂ. ಆಗಿತ್ತು. ಕಳೆದ ಒಂದು ವಾರದಲ್ಲಿ ಬಿಎಸ್ಇ ಲಿಸ್ಟೆಡ್ ಕಂಪನಿಗಳು ಸುಮಾರು 20 ಲಕ್ಷ ಕೋಟಿ (19.73 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿವೆ.

ಸಾಲ-ಬಡ್ಡಿಗಿಂತ ದುಪ್ಪಟ್ಟು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೀರಿ, ನಾನೀಗಲು ಆರ್ಥಿಕ ಅಪರಾಧಿಯೇ: ವಿತ್ತ ಸಚಿವೆ ನಿರ್ಮಲಾಗೆ ಮಲ್ಯ ಪ್ರಶ್ನೆ

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ ಮತ್ತು ಟ್ರೆಂಟ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ. ಅಂತೆಯೇ ಡಾ. ರೆಡ್ಡೀಸ್, ಜೆಎಸ್ ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಎಚ್​ಡಿಎಫ್​ಸಿ ಲೈಫ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.

Comments


bottom of page