ನಟಿ ಅಪೂರ್ವ ಅಭಿನಯದ ಚೊಚ್ಚಲ ಕಥಾ ಸಂಕಲನ 'ಪೆಂಟಗಾನ್'!
- new waves technology
- Oct 25, 2024
- 1 min read
ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಐವರು ನಿರ್ದೇಶಕರನ್ನು ಪೆಂಟಗಾನ್ ಕಥಾ ಸಂಕಲನದ ಮೂಲಕ ಒಟ್ಟಿಗೆ ಕರೆ ತರುತ್ತಿದ್ದಾರೆ.

ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಐವರು ನಿರ್ದೇಶಕರನ್ನು ಪೆಂಟಗಾನ್ ಕಥಾ ಸಂಕಲನದ ಮೂಲಕ ಒಟ್ಟಿಗೆ ಕರೆ ತರುತ್ತಿದ್ದಾರೆ.
ಚಂದ್ರಮೋಹನ್ ನಿರ್ದೇಶನದ ಕಥೆಯಲ್ಲಿ ಅಪೂರ್ವ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಅಪೂರ್ವ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿರ್ದೇಶಕರು ತಮ್ಮ ಕಥೆಯ ಪೋಸ್ಟರ್ ಹಂಚಿಕೊಂಡಿದ್ದಾರೆ. ನಟಿ ಅಮೂಲ್ಯ ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಪ್ರಮೋದ್ ಶೆಟ್ಟಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಕಿಶೋರ್ ಮತ್ತು ಚಿನ್ಮಯ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ಆರಂಭದಿಂದ ಚಿತ್ರದ ಅಂತ್ಯದವರೆಗೂ ತೆರೆ ಮೇಲೆ ಸ್ಥಾನವಿರುವುದಿಲ್ಲ, ಆದರೆ 3 ಗಂಟೆಯ ಈ ಸಿನಿಮಾದಲ್ಲಿ ನಾಯಕಿಗೆ 30 ನಿಮಿಷಗಳ ಪಾತ್ರ ನೀಡಲಾಗಿದೆ. ನಟಿಗೆ ಸಮಾನ ಅವಕಾಶ ನೀಡಲಾಗಿದೆ.
ಜಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಪೆಂಟಗನ್‌ನ ಇತರ ಕಥೆಗಳನ್ನು ರಘು ಶಿವಮೊಗ್ಗ, ಆಕಾಶ್ ಶ್ರೀವಾತ್ಸ, ಕಿರಣ್ ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ.
ನಾಲ್ಕು ಕಥೆಗಳ ಚಿತ್ರೀಕರಣ ಪೂರ್ಣಗೊಂಡಿದ್ದರೆ, ಗುರು ದೇಶಪಾಂಡೆ ನಿರ್ದೇಶನದ ಕಥೆ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ. ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಅಪೂರ್ವ ಕೂಡ ಪುರುಷೋತ್ತಮ ಚಿತ್ರದ ಭಾಗವಾಗಿದ್ದಾರೆ, ಇದರಲ್ಲಿ ಬಾಡಿಬಿಲ್ಡರ್ ರವಿಗೆ ಜೋಡಿಯಾಗಿದ್ದಾರೆ.
Comments