top of page

ಮೆಟ್ರೋ ದರ ಏರಿಕೆ ನಡುವೆ ಬೆಂಗಳೂರಿಗರ ಜೇಬು ಸುಡಲಿದೆ ಫಿಲ್ಟರ್ ಕಾಫಿ!

Writer: new waves technologynew waves technology

ಜಾಗತಿಕ ಕಾಫಿ ಬೀಜಗಳ ಬೆಲೆ ಏರಿಕೆಯಿಂದಾಗಿ ಮುಂದಿನ ತಿಂಗಳು ಕಾಫಿ ಬೆಲೆಯನ್ನು ಶೇ. 10 ರಿಂದ 15 ರಷ್ಟು ಹೆಚ್ಚಿಸಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ(ಬಿಬಿಎಚ್‌ಎ) ನಿರ್ಧರಿಸಿದೆ.

ಬೆಂಗಳೂರು: ಇತ್ತೀಚಿನ ಮೆಟ್ರೋ ದರ ಏರಿಕೆಯ ನಂತರ ಈಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದ್ದು, ನಗರದ ಐಕಾನಿಕ್ ಫಿಲ್ಟರ್ ಕಾಫಿ ಕುಡಿಯುವ ಮುನ್ನ ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳಬೇಕಾಗಿದೆ.

ಜಾಗತಿಕ ಕಾಫಿ ಬೀಜಗಳ ಬೆಲೆ ಏರಿಕೆಯಿಂದಾಗಿ ಮುಂದಿನ ತಿಂಗಳು ಕಾಫಿ ಬೆಲೆಯನ್ನು ಶೇ. 10 ರಿಂದ 15 ರಷ್ಟು ಹೆಚ್ಚಿಸಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ(ಬಿಬಿಎಚ್‌ಎ) ನಿರ್ಧರಿಸಿದೆ.

ಬಿಬಿಎಚ್‌ಎ ಅಧ್ಯಕ್ಷ ಪಿ ಸಿ ರಾವ್ ಅವರ ಪ್ರಕಾರ, ಜನವರಿಯಿಂದ ಕಾಫಿ ಬೀಜಗಳು ಮತ್ತು ಪುಡಿಯ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ಬೆಲೆ ಕೆಜಿಗೆ 200 ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಮಾರ್ಚ್‌ನಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಕಾಫಿ ಬೀಜಗಳ ಜಾಗತಿಕ ಕೊರತೆಯನ್ನು ಉಲ್ಲೇಖಿಸಿ, ಕಾಫಿ ಪುಡಿ ಬೆಲೆ ಮತ್ತಷ್ಟು ಏರಿಕೆಯಾಗುತ್ತವೆ. ಆದ್ದರಿಂದ, ಎಲ್ಲಾ ಸದಸ್ಯ ಹೋಟೆಲ್‌ಗಳು ತಮ್ಮ ಪ್ರಸ್ತುತ ಮಾರಾಟ ದರಗಳನ್ನು ಅವಲಂಬಿಸಿ ಕಾಫಿ ಬೆಲೆಯನ್ನು ಶೇಕಡಾ 10-15 ರಷ್ಟು ಹೆಚ್ಚಿಸುವಂತೆ ನಾವು ಸೂಚಿಸಿದ್ದೇವೆ. ಬೆಂಗಳೂರು ಉತ್ತಮ ಫಿಲ್ಟರ್ ಕಾಫಿಗೆ ಹೆಸರುವಾಸಿಯಾಗಿದೆ. ನಾವು ತುಂಬಾ ಸಮಂಜಸವಾದ ಬೆಲೆಗೆ ಕಾಫಿ ನೀಡುತ್ತಿದ್ದೇವೆ. ಫಿಲ್ಟರ್ ಕಾಫಿಯ ಕನಿಷ್ಠ ಬೆಲೆ ರೂ. 12 ರಿಂದ ಪ್ರಾರಂಭವಾಗಿ ಹೋಟೆಲ್ ಅನ್ನು ಅವಲಂಬಿಸಿ 40 ರೂ. ರವರೆಗೆ ಹೆಚ್ಚಾಗುತ್ತದೆ" ಎಂದು ರಾವ್ ಪಿಟಿಐಗೆ ತಿಳಿಸಿದ್ದಾರೆ.

"ನಾವು ನಮ್ಮ ಗ್ರಾಹಕರಿಗೆ ಹೊರೆಯಾಗಲು ಬಯಸುವುದಿಲ್ಲ. ಆದರೆ ಅನಿವಾರ್ಯ ಕಾರಣಗಳಿಂದಾಗಿ, ನಾವು ಬೆಲೆಯನ್ನು ಕೇವಲ ಶೇಕಡಾ 10-15 ರಷ್ಟು ಹೆಚ್ಚಿಸುತ್ತಿದ್ದೇವೆ. ಒಂದು ನಿರ್ದಿಷ್ಟ ಹೋಟೆಲ್‌ನಲ್ಲಿ ಪ್ರಸ್ತುತ ಕಾಫಿಯ ಬೆಲೆ ರೂ 12 ಆಗಿದ್ದರೆ, ಅದು 14 ರೂ.ಗೆ ಏರಬಹುದು. ಅದು 15 ರೂ. ಆಗಿದ್ದರೆ, ಪ್ರತಿ ಹೋಟೆಲ್ ಜಾರಿಗೆ ತಂದ ಶೇಕಡಾವಾರು ಹೆಚ್ಚಳವನ್ನು ಅವಲಂಬಿಸಿ 18 ರೂ.ಗೆ ಏರಬಹುದು" ಎಂದಿದ್ದಾರೆ.

Comments


bottom of page