top of page

ವಿಜಯಪುರ ವೈದ್ಯಕೀಯ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ರ‍್ಯಾಗಿಂಗ್; ಸಿಎಂ, ಪ್ರಧಾನಿಗೆ ಟ್ವೀಟ್

Writer: new waves technologynew waves technology

ಕಾಶ್ಮೀರದ ಅನಂತನಾಗ್ ಮೂಲದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹಮೀಮ್ ನಾಸೀರ್ ಹುಸೇನಿ ಅವರಿಗೆ ರ‍್ಯಾಗಿಂಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ವಿಜಯಪುರ: ವಿಜಯಪುರದ ಹೊರವಲಯದಲ್ಲಿರುವ ಅಲ್-ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಕಾಶ್ಮೀರ ಮೂಲದ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಶ್ಮೀರದ ಅನಂತನಾಗ್ ಮೂಲದ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹಮೀಮ್ ನಾಸೀರ್ ಹುಸೇನಿ ಅವರಿಗೆ ರ‍್ಯಾಗಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಫೆಬ್ರವರಿ 18 ರಂದು ಹಮೀಮ್ ಅವರು ಕಾಲೇಜು ಆಟದ ಮೈದಾನದಲ್ಲಿ 2019 ಮತ್ತು 2022 ಬ್ಯಾಚ್ ವಿದ್ಯಾರ್ಥಿಗಳ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ತೆರಳಿದ್ದ ವೇಳೆ ಸೀನಿಯರ್ಸ್ ಜತೆ ಗಲಾಟೆ ನಡೆದಿದೆ. ಬಳಿಕ ರಾತ್ರಿ ಹಾಸ್ಟೇಲ್​ನ ರೂಮಗೆ ಹಮೀಮ್ ಬಂದಾಗ 2019 ರ ಎಂಬಿಬಿಎಸ್ ವಿದ್ಯಾರ್ಥಿಗಳು, ಸೆಲ್ಯೂಟ್ ಮಾಡು, ಡಾನ್ಸ್ ಮಾಡು, ಹಾಡು ಹೇಳುವಂತೆ ರ‍್ಯಾಗಿಂಗ್ ಮಾಡಿದ್ದಾರೆ.


ನೀನು ಇನ್ನೂ ನಾಲ್ಕು ವರ್ಷ ಇಲ್ಲಿಯೇ ಇರಬೇಕು ಹೇಗೆ ಇರ್ತಿಯಾ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರಂತೆ. ಈ ವಿಚಾರವನ್ನು ರ‍್ಯಾಗಿಂಗ್​ಗೆ ಒಳಗಾದ ವಿದ್ಯಾರ್ಥಿ ಹಮೀಮ್ ನಾಸೀರ್ ಹುಸೇನಿ ಅವರು ತಮ್ಮ ಎಕ್ಸ್ ಖಾತೆಯಿಂದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ , ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಟ್ವೀಟ್ ಮಾಡಿದ್ದಾರೆ.

ಹಲ್ಲೆ ಮಾಡಿ ರ‍್ಯಾಗಿಂಗ್ ಮಾಡಿದ ಬಳಿಕ ಹಾಸ್ಟೇಲ್​ನಲ್ಲಿ ತನ್ನ ರೂಂ ಬಳಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಲಾಗಿದೆ. ಸುರಕ್ಷತೆಗಾಗಿ ಸೆಕ್ಯುರಿಟಿ ಗಾರ್ಡ್ ನಿಯೋಜನೆ ಮಾಡಲಾಗಿದೆ ಎಂದು ಮೆಸೇಜ್ ಜೊತೆಗೆ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯಪ್ರವೇಶಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘ(ಜೆಕೆಎಸ್ಎ)ದ ರಾಷ್ಟ್ರೀಯ ಸಂಚಾಲಕರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳು ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಸಂತ್ರಸ್ತ ವಿದ್ಯಾರ್ಥಿಗೆ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Comments


bottom of page