
ಲಖನೌ: ಉತ್ತರ ಪ್ರದೇಶದ ಸಂಭಾಲ್ ನಲ್ಲಿರುವ ಶಾಹಿ ಜಾಮಾ ಮಸೀದಿ "ವಿವಾದಿತ ಸ್ಥಳ" ಎಂದು ಉಲ್ಲೇಖಿಸಲು ಅಲಹಾಬಾದ್ ಹೈಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.
ಹಿಂದೂ ಅರ್ಜಿದಾರರ ಕೋರಿಕೆಯ ಮೇರೆಗೆ, ಶಾಹಿ ಮಸೀದಿಗೆ "ವಿವಾದಿತ ಕಟ್ಟಡ" ಎಂಬ ಪದವನ್ನು ಬಳಸುವಂತೆ ನ್ಯಾಯಾಲಯವು ಸ್ಟೆನೋಗ್ರಾಫರ್‌ಗೆ ಸೂಚನೆ ನೀಡಿದೆ.
ಸುಣ್ಣ ಬಳಿಯುವ ಅಗತ್ಯವಿಲ್ಲ ಎಂದು ಹೇಳುವ ಭಾರತೀಯ ಪುರಾತತ್ವ ಇಲಾಖೆ(ASI)ಯ ವರದಿಯನ್ನು ವಿರೋಧಿಸಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಸೂಚನೆ ನೀಡಿದೆ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ಹರಿಶಂಕರ್ ಜೈನ್ ಅವರು, 1927ರ ಒಪ್ಪಂದದ ಅಡಿಯಲ್ಲಿ ಮಸೀದಿಯ ನಿರ್ವಹಣೆಗೆ ತಾನು ಜವಾಬ್ದಾರನಾಗಿದ್ದೇನೆ ಎಂಬ ಸಮಿತಿಯ ಹೇಳಿಕೆಯನ್ನು ಪ್ರಶ್ನಿಸಿದ್ದು, ಮಸೀದಿಯ ಜವಾಬ್ದಾರಿ ASI ಮೇಲಿದೆ ಎಂದು ವಾದಿಸಿದರು.
ಮೊಘಲ್ ದೊರೆ ಬಾಬರ್ 1526 ರಲ್ಲಿ ಹಿಂದೂ ದೇವಾಲಯ ಹರಿಹರ ಮಂದಿರವನ್ನು ಕೆಡವಿ, ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಆ ಕುರಿತ ಸಮೀಕ್ಷೆ ನಡೆಸಿ ಅದರ ವರದಿ ಸಲ್ಲಿಸುವಂತೆ ಎಎಸ್ಐಗೆ ಸೂಚಿಸಿದೆ.
Comments